ವಿಂಡೋಸ್ ೮ ಎಂಬ ತಂತ್ರಾಶವು, ಮೈಕ್ರೋಸಾಫ್ಟ್ ವಿಂಡೋಸ್ ನ ಇತ್ತೀಚಿನ ಬಿಡುಗಡೆಯಾಗಿದೆ. ಇದು ಮೈಕ್ರೋಸಾಫ್ಟ್ ರಚಿತ ಕಾರ್ಯನಿರ್ವಹಣಾ ವಿಧಾನಗಳ ಸರಣಿಯಾಗಿದೆ. ಇದು ಗೃಹಬಳಕೆ ಮತ್ತು ವ್ಯಾಪಾರ ಡೆಸ್ಕ್ ಟಾಪ್ ಗಳು, ಲ್ಯಾಪ್ ಟಾಪ್ ಗಳು, ನೋಟ್‌ಬುಕ್‌ಗಳು, ಟ್ಯಾಬ್ಲೆಟ್ ಗಳು, ಮತ್ತು ಮೀಡಿಯಾ ಸೆಂಟರ್ ಗಳನ್ನು ಒಳಗೊಂಡಂತೆ ವೈಯಕ್ತಿಕ ಕಂಪ್ಯೂಟರ್ ಗಳ ಮೇಲೆ ಬಳಸುವ ಉತ್ಪನ್ನವಾಗಿದೆ. ವಿಂಡೋಸ್ ೮ ಅನ್ನು ಸಿದ್ದಪಡಿಸಿ ೨೦೧೨ ರ ಆಗಸ್ಟ್ ೧ ರಂದು ಬಿಡುಗಡೆ ಮಾಡಲಾಯಿತು.ಅಲ್ಲದೇ ಇದು ಸಾರ್ವತ್ರಿಕ ಸಗಟು ವ್ಯಾಪಾರಿಗಳಲ್ಲಿ ೨೦೧೨ ರ ಅಕ್ಟೋಬರ್ ೨೬ ರಿಂದ ದೊರೆವಂತಾಯಿತು. ಇದರ ಪೂರ್ವವರ್ತಿ ವಿಂಡೋಸ್ ೭ ಬಿಡುಗಡೆಯಾದ ಮೂರುವರ್ಷದ ಅವಧಿಯೊಳಗೆ ಇದನ್ನು ಬಿಡುಗಡೆ ಮಾಡಲಾಯಿತು.